ಅತ್ಮೀಯ ಸಹೋದರರೆ ಹಲವಾರು ಕಾರಣಗಳಿಂದ ಯಾವುದೆ ಅಂಕಣಗಳನ್ನು ಇತ್ತೀಚಿನ ದಿನಗಳಲ್ಲಿ ಬರೆಯಲು ಹೋಗಿಲ್ಲ ಆದರೆ ಒಂದು ವಿಷಯಾನ ನಿಮಗೆಲ್ಲ ತಿಳಿಸೊಕೋಸ್ಕರ ಇಂದು ಇದನ್ನು ಬರೆಯುತ್ತಿದ್ದೇನೆ.
ಮಾರಕ ರೋಗಗಳಲ್ಲಿ ಒಂದಾದ ಕ್ಯಾನ್ಸರ್(ಅರ್ಬುದ) ರೋಗಿಗಳಿಗೆ ದುಬಾರಿಯಾದರೂ ಇಂದು ಚಿಕಿತ್ಸೆ ಇದೆ. ಅವರಿಗೆ ಕೊಡುವ ಹಲವು ವಿಧದ ಮದ್ದುಗಳಲ್ಲಿ ಒಂದಾಗಿದೆ ಕ್ಯುಮೋ ಥೆರಪಿ ಈ ಚಿಕಿತ್ಸೆಯು ಅತ್ಯಂತ ದುಬಾರಿ ಎಂದು ಹೆಚ್ಚಿನ ನನ್ನ ಸಹೋದರ ಸಹೋದರಿಯರಿಗೆ ತಿಳಿದಿರಬಹುದು. ಕಳೆದ ವಾರ ಕ್ಯುಮೋ ಥೆರಪಿ ಮುಗಿಸಿದ ಒಬ್ಬ ರೋಗಿಗೆ ವೈದ್ಯರು ಒಂದು ರಕ್ತಕಣಗಳು ಕಡಿಮೆಯಾಗದಂತಹ ಚುಚ್ಚುಮದ್ದನ್ನು ಬರದು ಕೊಟ್ಟರು ಕ್ಯುಮೋದ ನಂತರ ರೋಗಿಗೆ ಮನೆಯಲ್ಲಿ ಯಾವುದೆ ತೊಂದರೆ ಆಗಬಾರದು ರಕ್ತಕಣಗಳು ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಕೊಡುವ ಚುಚ್ಚು ಮದ್ದು. ಈ ಚುಚ್ಚು ಮದ್ದು ಕೊಡದಿದ್ದರೆ ವ್ಯಕ್ತಿ ಒಂದು ವಾರದ ತನಕ ಮಲಗಿದ್ದಲ್ಲಿಂದ ಎದ್ದೇಳಲು ಆಗದಷ್ಟು ನಿಶ್ಯಕ್ತಿ ಮತ್ತು ಬೇರೆ ಕೆಲ ತೊಂದರೆ ಅನುಭವಿಸುತ್ತಾನೆ.
ವೈದ್ಯರು ಕೊಟ್ಟ ಚುಚ್ಚು ಮದ್ದಿನ ಹೆಸರು PEGEX ಇದು ಪೂಣೆಯಿಂದ ಸರಬರಾಜಾಗುವ ಕೇವಲ 6ml ಅತ್ಯಂತ ಚಿಕ್ಕ ಹಾಗು ಅತ್ಯಂತ ಹೆಚ್ಚು ಬೆಲೆಯ ಚುಚ್ಚುಮದ್ದು. ರೋಗಿಯೊಬ್ಬನ ತಂದೆ ವೈದ್ಯರು ನೀಡಿದ ಈ ಚೀಟಿಯನ್ನು ಹಿಡಿದುಕೊಂಡು ಹೋಗಿ ಒಂದು ಔಷಧಿ ಕೇಂದ್ರ(medical) ತೋರಿಸಿದರು. ಚೀಟಿ ನೋಡಿದ ಮಾಲಿಕ ಚುಚ್ಚು ಮದ್ದನ್ನು ತಂದು ಕೊಟ್ಟು ಅದರಲ್ಲಿ ನಮೂದಿಸಿದ ದರವಾದ 9250ರೂಪಾಯಿ ಎಂದ ಅದಕ್ಕೆ ರೋಗಿಯ ತಂದೆ ಅಷ್ಟಿದೆಯಾ ನಾನು ಅಷ್ಟೊಂದು ಹಣ ತಂದಿಲ್ಲ ಮನೆಗೆ ಹೋಗಿ ಆಮೇಲೆ ಬರುವೆ ಅಂತ ಆಗ ಮಾಲೀಕ ಹತ್ತಿರ ಬಂದು ನಿಮಗೆ ನಾನು 5000 ರೂಪಾಯಿಗೆ ಕೊಡುವೆ ಎಂದಾಗ ಇವರಿಗೆ ಆಶ್ಚರ್ಯವಾಯಿತು ಮತ್ತೆ ಬರುವೆ ಎಂದು ಇನ್ನೊಂದು ಕಡೆ ವಿಚಾರಿಸಿದಾಗ ಅಲ್ಲಿ 4500ರೂಪಾಯಿಗಳು. ಕೊನೇಗೆ ಆಸ್ಪತ್ರೆಯ ಔಷಧಿಯ ಕೇಂದ್ರದಲ್ಲಿ ಅದರ ದರ 4000ರೂಪಾಯಿಗಳು ಎಲ್ಲಾ ತೆರಿಗೆ ಸೇರಿ ಅಲ್ಲಿಂದ ಖರೀದಿಸಿ ರೋಗಿಗೆ ಕೊಡಲಾಯಿತು.
ಔಷಧಿ ಕೇಂದ್ರಗಳು ಯಾಕೆ ಹೀಗೆ ಮಾಡುತ್ತಿದೆ ರೋಗಿಗಳ ಪ್ರಾಣದ ಜೋತೆಗೆ ಆಟ ಆಡುತ್ತಿದೆಯೇ ? ಮಾರಕ ರೋಗದ ಈ ತರದ ಮದ್ದುಗಳು ಸಾದ್ಯವಾದಷ್ಟು ಕಡಿಮೆ ದರದಲ್ಲಿ ನೀಡುವ ಬದಲು ಜನರನ್ನು ವಂಚಿಸುತ್ತಿದೆ. ಜನಗಳು ಜಾತಿ ಧರ್ಮದ ವಿಷಯದಲ್ಲಿ ಅನ್ಯಾಯ ಆದಲ್ಲಿ ಬೀದಿಗಿಳಿಯುತ್ತಾರೆ ನಮ್ಮ ಸಮಾಜದ ಮುಖ್ಯ ಸಮಸ್ಸೆಗಳು ಇನ್ನೂ ಹೆಚ್ಚಿನವರಿಗೆ ತಿಳಿದೇ ಇಲ್ಲ.ಏನು ತಿಳಿಯದ ಅನಕ್ಷರಸ್ತ ಇಲ್ಲಿ 9250ರೂಪಾಯಿಗಳು ಕೊಟ್ಟು ಖರೀದಿಸಿದ ಸಾಕಷ್ಟು ಉದಾಹರಣೆ ಕೂಡ ಇದೆ. ಸಹೋದರರೆ ನೀವು ಕೂಡ ಯಾವುದಾದರು ದುಬಾರಿಯ ಮದ್ದು ಖರೀದಿಸುವಾಗ ಹಲವು ಕಡೆಗಳಲ್ಲಿ ವಿಚಾರಿಸಿ ಅದರಲ್ಲಿ ನಮೂದಿಸಿರುವ mrpl ದರಗಳು ನಮಗೆ ಮಾಡುವ ಮೋಸವಾಗಿರುತ್ತದೆ.
ನಮ್ಮ ಕರ್ನಾಟಕದಲ್ಲಿ ಎಲ್ಲಾ ಕಡೆಗಳಲ್ಲಿ genric medical ಗಳು ಬರುವಂತಾಗಲಿ ಅಥವ ಎಲ್ಲಾ ಔಷಧಿ ಕೇಂದ್ರಗಳಲ್ಲಿ ಸಮಾನ ದರ ನಿಗದಿಯಾಗಲಿ. ನಮ್ಮ ಘನವೆತ್ತ ಸರಕಾರ ಕೂಡ ಇತ್ತ ಗಮನಹರಿಸಲಿ ಎಂದು ಆಶಿಸುತ್ತೇನೆ.