ಅಮ್ಮ..! ಎಂಬ ಪದವೇ ಒಮ್ಮೆಗೆ ನಮ್ಮ ಮೈರೋಮಾಂಚನಗೊಳ್ಳುವಂತೆ ಮಾಡುತ್ತದೆ ನಿಜ ಅಮ್ಮನನ್ನು ಅದೆಷ್ಟೋ ಕವಿಗಳು ಯಾವುಯಾವುದಕ್ಕೋ ಹೋಲಿಸಿ ವಿಶೇಷ ಸ್ಥಾನವನ್ನು ಅಮ್ಮನಿಗೆ ನೀಡಿದ್ದಾರೆ ಅಮ್ಮನ ಕಾಲಡಿಯಲ್ಲಿ ಸ್ವರ್ಗ ಇದು ವಾಸ್ತವ ಕೂಡ ಹೀಗೆ ಅಮ್ಮನ ಬಗ್ಗೆ ಒಂದಿಷ್ಟು ನಿಮ್ಮ ಮುಂದೆ.
ಮಗ,ಈ ಪ್ರಿಜ್ ಹಳೇದಾಗಿದೆ ಈಗ ಹೊಸ ಸ್ಟೈಲ್ ನದ್ದು ಬಂದಿದೆ ಅಲ್ವಾ ಅದು ತರಬೇಕು ಇದು ಆಗಾಗ ಸರಿ ಇರಲ್ಲ ಇಟ್ಟ ವಸ್ತುಗಳೆಲ್ಲ ಹಾಳಾಗುತ್ತೆ ಅಂತ ಆಗಾಗ ಹೇಳುತ್ತಿದ್ದರು. ಅದಕ್ಕೆ ನಾನು ಅಂತು ಮುಂದಿನ ವಾರ ತಂಗಿ ಮನೆಗೆ ಬರುತ್ತಾಳೆ ಅವಳು ಬಂದಾಗ ಅವಳನ್ನು ಕೂಡ ಕರೆದುಕೊಂಡು ಹೋಗಿ ಹೊಸ ಪ್ರಿಜ್ ತರುವುದು ಎಂದು ತೀರ್ಮಾನಿಸಲಾಯಿತು ದಿನಾಂಕ ಕೂಡ ಪಿಕ್ಸ್ ಮಾಡಲಾಯಿತು. ಇದಾಗಿ ಎರಡು ದಿನ ಆಗಿರಲಿಲ್ಲ ಆಫೀಸಿನಿಂದ ಎಂದಿನಂತೆ ಊಟಕ್ಕೆ ಬಂದೆ ಆರ್ಧ ಊಟಮಾಡುವಾಗ ಕರೆಂಟು ಹೋಯಿತು ಬಿಸಿ ಬಿಸಿ ಊಟ ಬೇರೆ ಪ್ಯಾನ್ ಇಲ್ಲದೇ ಬೆವತು ಹೋಗಿರುವ ನನ್ನನ್ನು ಕಂಡು ಅಮ್ಮ ಒಂದು ಪುಸ್ತಕವನ್ನೆ ಬೀಸಣಿಗೆ ಮಾಡಿ ಬೀಸತೊಡಗಿದರು. ಕರೆಂಟಿಗೆ ಹಿಡಿ ಶಾಪ ಹಾಕುತ್ತಾ ನನ್ನ ಊಟ ಮುಗಿಯುವ ತನಕ ಬೀಸತೊಡಗಿದರು ಅಮೇಲೆ ಅವರಿಗೂ ಸುಸ್ತಾಗಿ ನನ್ನ ಪಕ್ಕ ಸೋಫಾದಲ್ಲಿ ಕೂತು ಮಗಾ,ಮೊನ್ನೆ ನಾ ನಿನ್ನಲ್ಲಿ ಹೊಸ ಪ್ರಿಜ್ ಬಗ್ಗೆ ಹೇಳಿದ ನಂತರ ಒಮ್ಮ ಕೂಡ ಈ ಹಳೇ ಪ್ರಿಜ್ ಹಾಳಾಗಿಲ್ಲ ಸದ್ಯಕ್ಕೆ ಬರೀ ಒಂದು ಲೀಟರ್ ಹಾಲು ಇಡುವುದಕ್ಕೋಸ್ಕರ ಯಾಕೆ ಹೊಸ ಪ್ರಿಜ್ ಇದೇ ಸಾಕು ಹಾಗೆ ಸಂಪೂರ್ಣ ಹಾಳಾದಮೇಲೆ ತರುವ ಹೊಸತು ತಂದರೆ ನಿನಗೂ ಆಗಾಗ ಐಸ್ ಹಾಕಿದ ನೀರು ಬೇಕಾಗುವುದು ಅದರಿಂದ ಮತೆ ಶೀತ ಆಗುವುದು. ಇತ್ತೀಚಿನ ದಿನಗಳಲ್ಲಿ ಕರೆಂಟ್ ಯಾವಾಗ ಹೋಗತ್ತೋ ಬರತ್ತೋ ಹೇಳಕಾಗಲ್ಲ ನೀ ಒಂದು ಕೆಲಸ ಮಾಡು ಕರೆಂಟು ಹೋದರೂ ಪ್ಯಾನ್ ತಿರುಗತ್ತಲ್ಲ ಇನ್ವರ್ಟರ್ ಇದ್ದರೆ ನೀ ಅದನ್ನು ತಾ ನೀ ಹೀಗೆ ಬೆವರುವುದನ್ನು ನನ್ನಿಂದ ನೋಡೋಕಾಗಲ್ಲ, ಅಂತ ಹೇಳಿ ಗಂಟೆ ನೋಡು ಎರಡು ಆಯಿತು ಹೊರಡಲ್ವಾ ಅಂದಾಗ ನಾನು ಎದ್ದು ಹೊರಟು ಅಮ್ಮನಿಗೆ ಸಲಾಂ ಹೇಳಿ ಬಂದು ನನ್ನ ಸ್ಕೂಟರಿನಲ್ಲಿ ಆಫೀಸಿಗೆ ಬರುವಾಗ ಅಮ್ಮ ನಮ್ಮ ಸಣ್ಣ ಕಷ್ಟಗಳನ್ನು ಕೂಡ ಅವರಿಂದ ಸಹಿಸಕ್ಕಾಗಲ್ಲ ನಮಗೋಸ್ಕರ ಅವರ ಬಹು ದಿನದ ಕನಸುಗಳನ್ನು ಕೂಡ ತ್ಯಾಗ ಮಾಡುತ್ತಾರೆ ಎಂದೆಲ್ಲಾ ಯೋಚಿಸಿ ಆಫೀಸು ತಲುಪುವಾಗ ನನಗರಿವಿಲ್ಲದೆ ನನ್ನ ಕಣ್ಣಿಂದ ಕೆಲ ಹನಿಗಳು ಜಾರಿಯಾಗಿತ್ತು.
ಅಮ್ಮ ಈ ಭೂಮಿಯಲ್ಲಿ ನಿನಗೆ ನೀನೆ ಸಾಟಿ ನೀನು ಅಲ್ಲಾಹನು ನಮಗೆ ಕೊಟ್ಟ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ನಾವೆಲ್ಲರು ಈ ಕರುಣಾ ಸಾಗರವನ್ನು ಚೆನ್ನಾಗಿ ನೋಡಿಕೊಳ್ಳುವ….
(ಚಿತ್ರ ಗೂಗಲ್ ಕೃಪೆ)
Ryly… Brother… Its hets of u…
LikeLiked by 1 person
ಧನಯವಾದ ಸಹೋದರ
LikeLike